ಭಾನುವಾರ, ಅಕ್ಟೋಬರ್ 16, 2011

ನನ್ನ ಬ್ಲಾಗಿಗೆ ಸ್ವಾಗತ

ಮಿತ್ರರೇ,

ನನ್ನ ಬ್ಲಾಗಿಗೆ ಸ್ವಾಗತ. ನಾನು ಶುಭ್ರಾತ್ಮಣಿ ಗುರುರಾಜ ಶಿವಶಿಂಪಿ, ಹುಟ್ಟಿದ್ದು ಬೆಳೆದದ್ದು ಕರ್ನಾಟಕ ರಾಜ್ಯದ ಇಳಕಲ್ ಮತ್ತು ಹುನಗುಂದ ಪಟ್ಟಣಗಳಲ್ಲಿ. ನನ್ನ ವಿಧ್ಯಾಭ್ಯಾಸ ಕೂಡ ಆಗಿದ್ದು ಇಳಕಲ್ ನಗರದಲ್ಲಿ. ನಾನು ಕಲಾ ವಿಭಾಗದ ಪಧವಿದರೆ. ನವೆಂಬರ್  ೨೮, ೨೦೧೧ ರಿಂದ ಗುರುರಾಜ ಶಿವಶಿಂಪಿ ಅವರನ್ನು ಮದುವೆಯಾಗಿ ಗೃಹಿಣಿ ಜೀವನ ನಡೆಸುತ್ತಿದ್ದೇನೆ. ನನ್ನ Husband ರಸಾಯನ ಶಾಸ್ತ್ರ ವಿಷಯದಲ್ಲಿ ಸಂಶೋಧಕರಾಗಿದ್ದು, ಈಗ ಅವರು Kyushu Institute of Technology, Kitakyushu, Japan ನಲ್ಲಿ  ಸಂಶೋಧನಾ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ. ಇದೆ ವರ್ಷ ಜೂನ್ ೨೬ ರಿಂದ ನನ್ನ ಪತಿ ಮತ್ತು ನಾನು, ಸೂರ್ಯ ಹುಟ್ಟುವ ನಾಡೆಂದು ಪ್ರಖ್ಯಾತಿ ಪಡೆದ, ಪುಟ್ಟದಾದ ಸುಂದರವಾದ ಜಪಾನ ದೇಶದಲ್ಲಿ ನಮ್ಮ ಪುಟ್ಟದಾದ ಸಂಸಾರ ದೋಣಿಯನ್ನು ಸಾಗಿಸುತ್ತಿದ್ದೇವೆ.

ನನ್ನ ಹವ್ಯಾಸಗಳು ಓದುವದು, ಮನಸ್ಸಿಗನಿಸಿದ್ದನ್ನು ಬರೆಯುವುದು, ಇಂಪಾದ ಸಂಗೀತ ಕೇಳುವುದು, ಅಡುಗೆಮನೆಯಲ್ಲಿ ಹೊಸ ರುಚಿಗಳನ್ನು ಪ್ರಯತ್ನಿಸುವದು ಮತ್ತು ಹೊಸ ಹೊಸ ಪ್ರವಾಸಿ ಸ್ಥಳಗಳನ್ನು ವಿಕ್ಷಿಸುವದು. ನನ್ನ ಹವ್ಯಾಸಗಳಲ್ಲಿ ಒಂದಾದ ಬರೆಯುವ ಕ್ರಿಯೆಯನ್ನು ಜೀವಂತವಾಗಿರಿಸಲು ನನ್ನ Husband ಪ್ರೋತ್ಸಹಿಸಿದ್ದಕ್ಕಾಗಿ ಈ ಬ್ಲಾಗಿಂಗ್ ಜಗತ್ತಿಗೆ ಪ್ರವೇಶಿಸಿದೆ. ಜೀವನದ ವಿವಿಧ ಅನುಭವಗಳನ್ನು, ವಿಕ್ಷಿಸಿದ ಹೊಸ ಸ್ಥಳಗಳಬಗ್ಗೆ ಹಾಗೂ ಹೊಸ ಅಡುಗೆ ರುಚಿಬಗ್ಗೆ ಈ ನನ್ನ ಬ್ಲಾಗ್ ಮೂಲಕ ತಮ್ಮೊಂದಿಗೆ ಹಂಚಿಕೊಳ್ಳುವೆ.

ಧನ್ಯವಾದಗಳು......

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ