ಡಿಸೆಂಬರ್ 23-2011, ರಂದು ನಾಗಾಸಾಕಿ, ನೋಡಲು ಹೋದೆವು. ಅಂದು ಬೆಳಿಗ್ಗೆ 7-00 ಘಂಟೆಗೆ Orio station ದಿಂದ ರೈಲು. ಅದ್ದರಿಂದ ಸರಿಯಾದ ಸಮಯಕ್ಕೆ ಹೋದೆವು, ಸರಿಯಾದ ಸಮಯಕ್ಕೆ ರೈಲು ಬಂತು ಇಲ್ಲಿ ಸಮಯದ ಶಿಸ್ತಿಗೆ ಬಹಳ ಒತ್ತು ಕೊಡುತ್ತಾರೆ. 7-00 ರ ನಂತರ ಒಂದು ನಿಮಿಷ ಆದರು ನಿಲ್ಲುವದಿಲ್ಲ. ಹಾಗಾಗಿ ಸರಿಯಾಗಿ ರೈಲು ಬಂತು ನಾವು ಮತ್ತು ನಮ್ಮ ಸ್ನಹಿತೆಯ ಕುಟುಂಬ ಒಟ್ಟಿಗೆ ಹೋಗಿದ್ದೆವು. ಅಂದು ತುಂಬ ಚಳಿ ಸುತ್ತೆಲ್ಲಾ ಮಂಜು ಬಿಳುತಿತ್ತು ಅದನ್ನು ನೋಡುವುದೇ ಒಂದು ಸಂಭ್ರಮ. ನೋಡನೋಡುತ್ತಲೇ ನಾಗಾಸಾಕಿ ಬಂದೇಬಿಟ್ಟಿತು. ಅಲ್ಲಿಂದ ಮೊದಲು Glover garden ನೋಡಲು ಹೋದೆವು. Thomas Blake Glover ಎಂಬ ಸ್ಕಾಟ್ಲ್ಯಾಂಡ್ ನ ಒಬ್ಬ ವ್ಯಾಪಾರೀ ಈ ಉದ್ಯಾನವನವನ್ನು ನಿರ್ಮಿಸಿದ್ದಾನಂತೆ. ಅದು ಒಂದು ಮೈ ರೋಮಾಂಚನ ಆಗುವ ಸ್ಥಳ. ಬೆಟ್ಟದ ಮೇಲೆ ಅದನ್ನು ಮಾಡಲಾಗಿದ್ದು, ಅಲ್ಲಿ ಹೋಗಿ ನಿಂತರೆಸಾಕು ಕೆಳಗಿನ ಇಡಿ ನಗರವೇ ಸುಂದರವಾಗಿ ಕಾಣುವುದು. ನಂತರ ಒಳಗೆ ಪ್ರವೇಶ ಮಾಡಿದಿವಿ. ಅಲ್ಲಿ ಪ್ರಾಚಿನಕಾಲದ ವಸ್ತುಗಳನ್ನು ಸಂಗ್ರಹಿಸಿಡಲಾಗಿತ್ತು, ಅವುಗಳನ್ನು ನೋಡುತ್ತಲೇ ನನ್ನ ಗಮನ ವಿಶೇಷವಾಗಿ ಪಾಶ್ಚಾತ್ಯ ಉಡುಗೆ ಕಡೆ ಹೋಯಿತು. ಅವುಗಳನ್ನು 500 ಯನ್ ಗೆ 30 ನಿಮಿಷ ಬಾಡಿಗೆಗೆ ಆ ಉಡುಗೆಗಳು ದೊರೆಯುತ್ತಿತ್ತು, ಅದನ್ನು ದರಿಸಿ ಕೆಲವು ಫೋಟೋಗಳನ್ನು ತೆಗೆದುಕೊಂಡು ಸಮಯಮುಗಿಯೋದಕ್ಕೆ ಅವುಗಳನ್ನು ಮರಳಿಸಿದಿವಿ. ಆನಂತರ ಹೊಟ್ಟೆ ತುಂಬಾ ಹಸಿವಾಯಿತು ಎಲ್ಲರೂ ಮನೆಯಿಂದ ತಂದ ಅಡುಗೆಯನ್ನು ಬಹಳ ಆನಂದದಿಂದ ಊಟ ಮಾಡಿ, ಸ್ವಲ್ಪ ವಿಶ್ರಾಂತಿ ತೆಗೆದುಕೊಂಡೆವು.
ನಂತರ Atomic bomb hypo center, Peace Park ಮತ್ತು Atomic bomb museum ನೋಡಲು ಸಾಗಿದೆವು. ನಾವು ಮೊದಲು Hypo Center ಭೇಟಿಕೊಟ್ಟೆವು. ಇದೆ ಜಾಗದಲ್ಲಿ ಅಗಸ್ಟ್ 19, 1945 ರಂದು ಬೆಳಿಗ್ಗೆ 11-02 ಕ್ಕೆ ಅಮರಿಕನ್ನರು ಅಣು ಬಾಂಬ್ ಎಸೆದರು. ಈ ದಾಳಿಯಲ್ಲಿ ೧೫೦, ೦೦೦ ಜನರು ಮರಣಹೊಂದಿದರಂತೆ.
Atomic bomb museum ನಲ್ಲಿ, ಅಣುಬಾಂಬ ದಾಳಿಯಿಂದಾದ ಅನಾಹುತಗಳು ಮತ್ತು ಮಹತ್ವದ ಐತಿಹಾಸಿಕ ಘಟನೆಗಳನ್ನು ಒಂದು ಕಥೆಯ ರೂಪದಲ್ಲಿ ತೋರಿಸಲಾಗಿದೆ. ಅಣು ಶಸ್ತ್ರಾಸ್ತ್ರಗಳ ಸಂಶೋಧನೆ ಮತ್ತು ಅಭಿವೃದ್ಧಿಯ ಇತಿಹಾಸದ ನೀರುಪಣೆ, ಅಣುಬಾಂಬ ದಾಳಿಯಾ ನಂತರದ ಕರಾಳ ದೃಶ್ಯಗಳ ಛಾಯಾಚಿತ್ರಗಳು, ಅಳಿದುಳಿದ ಸ್ಮಾರಕಗಳು, ಅವಶೇಷಗಳು, ಅರೆಬರೆ ಬೆಂದ ಸಲಕರಣೆಗಳನ್ನು ಮತ್ತು ಪರಮಾಣು ಬಾಂಬ್ ದಾಳಿಗೆ ಸಂಬಂಧಿಸಿದ ದಾಖಲೆಗಳನ್ನು ಪ್ರದರ್ಶಿಸಲಾಗಿದೆ. ಆ ಘಟನೆಯಲ್ಲಿ ಬದುಕಿ ಉಳಿದಂತ ವ್ಯಕ್ತಿಗಳ ಸಂದರ್ಶನದ ವೀಡಿಯೊಗಳನ್ನು ಕೂಡ ತೋರಿಸಲಾಗಿದೆ. ಸಂದರ್ಶನದಲ್ಲಿ, ಅವರು ತಮ್ಮ ಕುಟುಂಬದಲ್ಲಿರುವವರನ್ನು ಕಳೆದುಕೊಂಡ ದುಃಖವನ್ನು ತೋಡಿಕೊಂಡಿದ್ದಾರೆ.
ಈ ಐತಿಹಾಸಿಕ ದುರಂತದ ಎಲ್ಲ ಘಟನೆಗಳನ್ನು ನೋಡಿ ಹೊರಗೆ ಬಂದು ಈಗಿನ ನಗರದ ಅಭಿರುದ್ದಿಯನ್ನು ನೋಡಿದಮೇಲೆ ನನಗೆ ಇದೆ ಸ್ಥಳದಲ್ಲಿ ಈ ಘಟನೆಗಳು ಆಗಿದ್ವಾ ಅಂತ ಅನಿಸುತ್ತದೆ. ಯಾಕಂದ್ರೆ ಆ ಸ್ಥಳವನ್ನು ನಾನು ನಿರೀಕ್ಷೆ ಮಾಡಲು ಸಾದ್ಯವಿಲ್ಲ ಅಷ್ಟೊಂದು ಸುಂದರವಾಗಿ ಬೆಳಿಸಿದ್ದಾರೆ. ಈ ನಗರವು ಆರ್ಥಿಕವಾಗಿಯೂ ಕೂಡ ಮುಂದಿದೆ. ನಿಜವಾಗು ಹೇಳ್ಬೇಕು ಅಂದ್ರೆ ಈದು ಒಂದು ಮಾದರಿಯ ರಾಷ್ಟ್ರ.
Glover garden
ಬಾಂಬ್ ಎಸೆದ ಸ್ಥಳ.
ಅರೆಬರೆ ಸುಟ್ಟ ಬಟ್ಟೆಗಳು
ಬಾಂಬ್ ದಾಳಿಯ ನಂತರದ ದೃಶ್ಯ
೧೧.೨ ನಿಮಿಷಕ್ಕೆ ಸರಿಯಾಗಿ ಸ್ಪೋಟವಾದ ಸಮಯವನ್ನು ಈ ಗಡಿಯಾರದಲ್ಲಿ ನೀವು ನೋಡಬಹುದು.
Peace statue ಮುಂದೆ.