ಭಾನುವಾರ, ನವೆಂಬರ್ 27, 2011

ಜಪಾನಿನಲ್ಲಿ ನಾವು ಆಚರಿಸಿದ ದೀಪಾವಳಿ

ಅಕ್ಟೋಬರ್ ೨೬ ರಂದು ದೀಪಾವಳಿ ಹಬ್ಬ. ಇದೆ ಮೊದಲಸಾರಿ ಮನೆಯವರನ್ನು ಬಿಟ್ಟು ಆಚರಿಸಿದ ಹಬ್ಬ. ನನ್ನ ಅಣ್ಣಂದಿರು, ಅತ್ತಿಗೆ, ಮನೆಯವರೆಲ್ಲರನ್ನು ತುಂಬಾನೆ miss ಮಾಡ್ಕೊಂಡೆ. ಹೊರಗಡೆ ನೋಡಿದರೆ ಎಲ್ಲ ಶಾಂತ ವಾತವರಣ ಆದರೆ ಭಾರತದಲ್ಲಿ ಇಂದು ಎಲ್ಲರ ಮನೆಯಲ್ಲೂ ಸಂಭ್ರಮ, ಪಟಾಕಿಗಳ ಸದ್ದು, ಎಲ್ಲಿ ನೋಡಿದರು ದೀಪಗಳ ಅಲಂಕಾರ. ಆ ಅನುಭವ ಇಲ್ಲಿ ಹೇಗೆ ಕಾಣಲು ಸಾಧ್ಯ! ಅಂದು ನನ್ನ husband ಸಾಯಂಕಾಲ ಬೇಗಬಂದ್ರು. ಪೂಜೆಗೆ ಎಲ್ಲ ತಯಾರಿ ಮಾಡಿದ್ದೆ. ಹಾಗೆ  ಸಿಹಿ ತಿಂಡಿಗಳು, ಹಲ್ವ, ವಡೆ, ೫ ವಿಧದ ಹಣ್ಣುಗಳು, ಹೂವು ಪೂಜೆ ಮಾಡಲು ಬೇಕಾಗುವ ಎಲ್ಲ ವಸ್ತುಗಳು ತಯಾರಿಯೊಂದಿಗೆ ಪೂಜಾ ಪ್ರಾರಂಭ ಮಾಡಿದೆವು. ದೀಪಗಳಿಂದ ಮನೆಯನ್ನು ಅಲಂಕರಿಸಿ ಲಕ್ಷ್ಮಿ ಪೂಜೆ ಮಾಡಿ ದೀಪಾವಳಿಯ ಹಬ್ಬದ ಸಂಭ್ರಮ ಪಟ್ಟೆವು.



ಅದೇನೋ ಗೊತ್ತಿಲ್ಲ ನಮ್ಮ ಹಬ್ಬಗಳಲ್ಲಿ ಎಸ್ಟೊಂದು ವಿಶೇಷತೆ ಅಲ್ವಾ. ಹಿಂದೂ ಧರ್ಮದ ಜನರು ಪ್ರತಿ ವರ್ಷವೂ ಪ್ರಪ೦ಚದ ಎಲ್ಲೆಡೆ ದೀಪಾವಳಿಯನ್ನು ವಿಜೃ೦ಭಣೆಯಿ೦ದ ಆಚರಿಸುತ್ತಾರೆ. ಹೊಸ ಬಟ್ಟೆಗಳು, ಸಿಹಿತಿ೦ಡಿಗಳು ಎಲ್ಲಕ್ಕೂ ಹೆಚ್ಚಾಗಿ ಪಟಾಕಿಗಳಿಗೆ ದೀಪಾವಳಿ ಪ್ರಸಿದ್ಧ. ಉತ್ತರ ಭಾರತದಲ್ಲಿ ದೀಪಾವಳಿಯ ಸಮಯವೇ ಹೊಸ ಆರ್ಥಿಕ ವರ್ಷದ ಅರಂಬ ದಿನವಂತೆ.  ಹೊಸ ಲೆಕ್ಕದ ಪುಸ್ತಕಗಳನ್ನು ಈ ಸಮಯದಲ್ಲೇ ತೆರೆಯಲಾಗುತ್ತದೆ. ದೀಪಾವಳಿಯ ಅಂಗವಾಗಿ ನಡೆಯುವ ಇತರ ಸಮಾರಂಭಗಳಲ್ಲಿ ಆಯುಧಪೂಜೆ ಮತ್ತು ಗೋಪೂಜೆಗಳನ್ನು ಹೆಸರಿಸಬಹುದು. ಪಟಾಕಿಗಳನ್ನು ಸ್ಫೋಟಿಸುವುದು ದೀಪಾವಳಿಯ ಆಚರಣೆಯ ಒಂದು ಭಾಗವಾಗಿದೆ. ವಿಶೇಷವಾಗಿ  ಅಮಾವಾಸ್ಯೆಯಂದು ಆಚರಿಸಲಾಗುವ ಲಕ್ಷ್ಮಿ ಪೂಜೆ ಮುಖ್ಯವಾದದ್ದು. ಯಾವ ದೇಶದಲ್ಲೂ ಕೂಡಾ ಈ ಸಂಪ್ರದಾಯ, ಸಂಭ್ರಮ ಇಲ್ಲ ಅನಿಸುತ್ತೆ. ಇಡಿ ನಾಡಿನಾದ್ಯಾಂತ ಪ್ರತಿಯೊಂದು  ಮನೆಯಲ್ಲೂ ಆಚರಿಸುವ ಈ ಹಬ್ಬ ಬದುಕನ್ನು ಕತ್ತಲಿಂದ ಬೆಳಕಿನೆಡೆಗೆ ಕೊಂಡೊಯ್ಯುವ ಹಬ್ಬ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ