ಭಾನುವಾರ, ನವೆಂಬರ್ 06, 2011

Green park visit.....

ಅಕ್ಟೋಬರ್ 10, ಅಂದು ರವಿವಾರ ನಾನು ಮತ್ತು ನನ್ನ husband ಇಬ್ಬರು Green park ನೋಡಲು ಹೋದೆವು. Green park ಇದು Kitakyushu ನಗರದ ಆಕರ್ಷಣೀಯ ಸ್ಥಳಗಳಲ್ಲಿ ಒಂದು. ಅದು ಅತ್ಯಂತ ಆಕರ್ಷಣೀಯ ತಾಣ. ಬಣ್ಣ ಬಣ್ಣದ ಹೂಗಳು ಮನಸ್ಸಿಗೆ ಉಲ್ಲಾಸ ಕೊಡುತ್ತವೆ. ಹೆಸರಿಗೆ ತಕ್ಕಂತೆ ಎಲ್ಲಿ  ನೋಡಿದರು ಹಸಿರು. ನಾನಾ ಬಗೆಯ ಹೂಗಳು. ಇಲ್ಲಿ ಇವುಗಳನ್ನೂ ಕಾಯಲು ಕಾವಲುಗಾರರು ಇರಲ್ಲಿಲ್ಲ. ಎಲ್ಲರೂ ಮಕ್ಕಳಿಗೆ ಸರಿ, ತಪ್ಪುಗಳ ತಿಳುವಳಿಕೆ ಸಣ್ಣ ವಯಸ್ಸಿನಿಂದಾ ಮನವರಿಕೆ ಮಾಡಿಸಿರುತ್ತಾರೆ. ಹಾಗಾಗಿ ಯಾರು ಕೂಡಾ ಹಾಳು ಮಾಡುವುದಿಲ್ಲ. ನನಗೆ ನೋಡಿ ತುಂಬಾನೇ ಖುಷಿ ಆಯಿತು ಮತ್ತೆ ಕೆಲವು ಫೋಟೋ ತೆಗೆದುಕೊಂಡ್ವಿ.

 


ಗುಲಾಬಿ ಹೂತೋಟದಲ್ಲಿ ತೆಗೆದ ಕೆಲವು ಫೋಟೋಗಳು.....



Green park ನ ಮತ್ತೊಂದು attraction ಅಂದ್ರೆ "Tropical house". ಇಲ್ಲಿ Tropical climate ನಲ್ಲಿ ಬೆಳೆಯುವಂತ ವಿವಿಧ ಸಸ್ಯಗಳನ್ನೂ ಬೆಳೆಸಿದ್ದಾರೆ ಮತ್ತು ಕೆಲವು ಪಕ್ಷಿಗಳು, ಬಣ್ಣ ಬಣ್ಣದ ಚಿಟ್ಟೆಗಳು, ಆಮೆ, ಮೀನು ಹೀಗೆ ಎಲ್ಲವನ್ನು ಸಾಕಿದ್ದಾರೆ. ಹಸಿರು ಗಿಡ, ಬಳ್ಳಿ, ನೀರಿನ ಜರೀ, ನನ್ನ ಮುಂದೇನೆ ಹಾರಾಡುವ ಚಿಟ್ಟೆಗಳು ಮತ್ತು ಪಕ್ಷಿಗಳು ಇವುಗಳನ್ನು ನೋಡಿ ನನಗೆ ಒಂದು ಕ್ಷಣ, ಎಲ್ಲಿ ಕಾಡಿನೊಳಗೆ ಬಂದಿದಿವೋ ಅಂತಾ ಅನುಭವವಾಯ್ತು. ಇದು ನಿಜವಾಗಲು ಅಸ್ಟೊಂದು ಸುಂದರವಾದ ಸ್ಥಳ.

 


ನೋಡುನೋಡುತ್ತ ಸಮಯ ಹೋಗಿದ್ದೆ ಗೊತ್ತಾಗ್ಲಿಲ್ಲ. ಸಾಯಂಕಾಲ 6-30 ಕ್ಕೆ ಅಲ್ಲೆ ಕಾಫಿ ಕುಡಿದು ಮನೆಗೆ ಬಂದೆವು. 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ