ಮಂಗಳವಾರ, ನವೆಂಬರ್ 01, 2011

ಜಪಾನ ದೇಶದಲ್ಲಿ ನಾನು ಕಾಲಿಟ್ಟ ಮೊದಲದಿನಗಳ ಅನುಭವಗಳು.

ಜಪಾನ ನೋಡಲು ತುಂಬಾ ಸುಂದರ. Kitakyushu, ಇದು ಈಗ ನಾವಿರುವ ಊರಿನ ಹೆಸರು. ಕೇಳಲು ವಿಚಿತ್ರ ಅನಿಸಿದರು ಈ ಹೆಸರಿನಲ್ಲಿ ಒಂದು ಅರ್ಥ ಇದೆಯಂತೆ. ಈ ದೇಶದ ನಾಲ್ಕು ಮುಖ್ಯ ದ್ವೀಪಗಳಾದ "Honshu", "Hokkaido", "Shikoku" ಮತ್ತು "Kyushu" ಗಳಲ್ಲಿ ಒಂದಾದ "Kyushu" ದ್ವೀಪದ ಈ ಊರು ಇದ್ದು Japanese ಭಾಷೆಯಲ್ಲಿ ಉತ್ತರ ದಿಕ್ಕಿಗೆ "Kita" ಅನ್ನುತರಂತೆ. ಅದಕ್ಕಾಗಿ ಈ ಊರಿನ ಹೆಸರು Kitakyushu (ಉತ್ತರ Kyushu). Kitakyushu ನಗರದ ಪ್ರಮುಖ ಆಕರ್ಷಣೆಗಳೆಂದರೆ "Space world", "Green park", "River walk mall", "Sarakura mountain" ಮತ್ತು "Kokura castle".

ಮೊದಮೊದಲಿಗೆ ಮನಸ್ಸಿಗೆ ಏನೋ ಒಂದು ಉಲ್ಲಾಸ, ಬೇರೆ ದೇಶದಲ್ಲಿದ್ದೆನೆಂಬ ಹೆಮ್ಮೆ. ನಂತರ ಕೆಲವು ದಿನಗಳು ಹೀಗೆ  ಕಳೆದೆ. ನನ್ನ husband  ಬೆಳಿಗ್ಗೆ 9-30 ಕ್ಕೆ ಹೋದರೆ ಬರೋದು ಸಯಂಕಾಲ 7-30 ಕ್ಕೆ. ಅಲ್ಲಿಯವರೆಗೂ ಸಮಯ ಕಳೆಯಲು ತುಂಬಾ ಬೇಜಾರ ಆಗ್ತಿತ್ತು, ಇಲ್ಲಿ ಯಾರು ಇಂಗ್ಲಿಷ್ ಮಾತನಾಡುವುದಿಲ್ಲ. ಎಲ್ಲರು Japanese ಭಾಷೆ ಮಾತನಾಡುವರು. ಹೀಗಾಗಿ ನನಗೆ ತುಂಬಾನೆ ಕಷ್ಟ ಅನಿಸಿತ್ತು. ಭಾಷೆ ಬರದೆ ನಾನು ಅವರೊಂದಿಗೆ ಹೇಗೆ ತಾನೆ ಸ್ನೇಹ ಮಾಡಲು ಸಾಧ್ಯ. ಸ್ವಲ್ಪಾ ಕಷ್ಟನೆ. ಆದ್ರೆ  ಫ್ರೆಂಡ್ಸ್ ಇಲ್ದೆ ಬದ್ಕೋದು ಅಸಾದ್ಯ. 2ನೇ ವಾರ ನನ್ನ  husband Japanese ಕ್ಲಾಸ್ಗೆ ಕಳಿಸಿದರು. ಏಕೆಂದರೆ ಇಲ್ಲಿ Japanese ಭಾಷೆ ಕಲಿಯದೇ ಇದ್ದರೆ ದಿನನಿತ್ಯದ ಜೀವನ ಕಷ್ಟ. ಅಲ್ಲಿಗೆ ನನ್ನ ಹಾಗೆ ವಿದೇಶಿ ಜನರು Japanese ಭಾಷೆ ಕಲಿಯಲು ಬಂದಿದ್ದರು. ಅವರಲ್ಲಿ Charlott ಎಂಬವಳು ಪರಿಚಯ ವಾದಳು. ಅವಳು ಫ್ರಾನ್ಸ್ ದೇಶದವಳು. ಒಂದೆರಡೆ ವಾರಗಳಲ್ಲಿ ತುಂಬಾನೇ ಕ್ಲೋಸ್ ಫ್ರೆಂಡ್ ಆದ್ಲು. ಶುಕ್ರುವಾರ ಮಾತ್ರಾ ಕ್ಲಾಸ್ ಇರ್ತಿತ್ತು.  ಮತ್ತೊಬ್ಳು Israel ದಿಂದ ಬಂದ "Mai" ಅಂತ. ಅವಳು ಕೂಡಾ ಫ್ರೆಂಡ್ ಆದಳು. ಆಗ ನನಗೆ ತುಂಬಾನೇ ಕುಷಿ ಆಯಿತು. ಇಬ್ರು ಒಳ್ಳೆ ಫ್ರೆಂಡ್ಸ್, ಒಂದಿನಾ ನಮ್ಮ ಮನೆಗೆ ಒಂದಿನ ಅವ್ರ ಮನೆಗೆ ಹೀಗೆ ಮಸ್ತಿ, ಮಜಾ, ಶಾಪಿಂಗ್ ಅಂತಾ ಎಂಜಾಯ್ ಮಾಡ್ತಾ ಇದ್ದಿವಿ.


ನನ್ನ ಫ್ರೆಂಡ್ಸ್ ಮಸಾಲೆ ದೋಸೆ ಸವಿಯುತ್ತ ಎಂಜಾಯ್ ಮಾಡುತ್ತಿದ್ದಾರೆ.


Japanese ಭಾಷೆ ಮೊದ್ಲು ಕೇಳಲು ಇದ್ಯಂತ ಭಾಷೆ ಅರ್ತನೆ ಆಗೋಲ್ಲ ಅಂತಾ ಅನ್ಕೊಂಡಿದ್ದೆ. ಆದರೆ ನಮ್ಮ Japanese ಕ್ಲಾಸಿನಲ್ಲಿ English to Japanese ಟೀಚ ಮಾಡಿದ್ರು, ಅದು ತುಂಬಾನೇ ಇಷ್ಟಾಆಯಿತು. ನಾನು ಮೊದಲು ಕಲಿತ ನಾಲ್ಕು ಪದಗಳು....
  1. Ohayo gozaimas ಅಂದ್ರೆ Good morning
  2. Konnichiva ಇದು Hello good afternoon
  3. Sumimasen ಅಂದ್ರೆ Excuse me ಮತ್ತು 
  4. Arigato gozaimas ಅಂದ್ರೆ Thank you.