ಮಂಗಳವಾರ, ನವೆಂಬರ್ 08, 2011

ನನ್ನ ನೆಚ್ಚಿನ KSN ಅವರ ಕವನ


ನಿಜದ ಸಂತಸದಲ್ಲಿ ಬಿರಿದ ಮಲ್ಲಿಗೆಇಂದ ಬರುವ ಕಂಪಿನ ಹೆಸರು ಪ್ರೇಮವೆಂದು,
ನೀಲಾಂತರಿಕ್ಷದಲಿ ಹೊಳೆವ ನಕ್ಷತ್ರಗಳ ಕಣ್ಣಸನ್ನೆಯ ಹೆಸರು ಪ್ರೇಮವೆಂದು.

ಹಸಿರು ಬಯಲಿಗೆ ಇಳಿದ ಬಿಳಿಬಿಳಿಯ ಹಕ್ಕಿಗಳ ದೂರದಿಂಪಿನ ಹೆಸರು ಪ್ರೇಮವೆಂದು,
ಮಾಲಗಣ್ಣಿನ ಹೆಣ್ಣೇ ನಿನ್ನ ತುಟಿ ಇಕ್ಕೆಲದಿ ಮಂದಹಾಸದ ಹೆಸರು ಪ್ರೇಮವೆಂದು.

ಯಾವುದೋ ಕನಸಿನಲಿ ಯಾರೋ ಹಾಡಿದ ಹಾಡು ಮಿಡಿದ ಹೃದಯದ ಹೆಸರು ಪ್ರೇಮವೆಂದು,
ಬಳಿಗೆ ಬಾರೆನ್ನವಳೆ ಬಿಗಿದಪ್ಪಿ ಮಾತಾಡು ನಾನದನೆ ಕರೆಯುವೆನು ಪ್ರೇಮವೆಂದು.

ಬಾರೆನ್ನ ಮನದನ್ನೆ ಬರಲಿ ಹತ್ತಿರ ಕೆನ್ನೆ ಮುತ್ತಿನಲಿ ಒಂದಾಗಲೆರಡು ಜೀವ,
ಬಾಳಿನೇರಿಳಿತಗಳ ಮುಗಿಯದಿರದ ಪಯಣಕ್ಕೆ ಶುಭವ ಕೋರಲಿ ಸುಳಿದು ಧನ್ಯಭಾವ

                                    ------------- ಕೆ. ಎಸ್. ನರಸಿಂಹಸ್ವಾಮಿ. 

1 ಕಾಮೆಂಟ್‌: